ಮತ್ತೆ ವಿದ್ಯುತ್ ದರ ಏರಿಕೆಯಾಗಿದೆ. ಹಾಗಂತ ಮನೆ ಟಿವಿ, ಕಂಪ್ಯೂಟರ್, ಏಸಿ, ಫ್ರಿಜ್, ರೆಫ್ರಿಜರೇಟರ್ ಬಳಸದಿರಕ್ಕಾಗುತ್ತದೆಯೇ ? ಸಾಧ್ಯವೇ ಇಲ್ಲ. ಅವೆಲ್ಲ ಅವಶ್ಯಕ ಉಪಕರಣಗಳಾಗಿಬಿಟ್ಟಿವೆ. ಆದರೆ ಇವುಗಳಿಂದಾಗಿ ವಿದ್ಯುತ್ ಬಿಲ್ ಮಾತ್ರ ಹೆಚ್ಚು ಬರುತ್ತದೆ. ಇವುಗಳ ಮಿತವ್ಯಯದಿಂದ ಹಾಗೂ ಕೆಲವು ಸೂಕ್ತ ಉಪಾಯಗಳನ್ನು ಅನುಸರಿಸುವುದರಿಂದ ವಿದ್ಯುತ್ ಬಿಲ್ ಕಡಿಮೆ ಬರುವಂತೆ ಮಾಡಬಹುದು.
ಏರ್‌ಕಂಡೀಶನರ್
ನಿಮಗೆ ಸಹಿಸಲು ಸಾಧ್ಯವಾಗುವಷ್ಟರ ಮಟ್ಟಿಗೆ ಅದರ ತಾಪಮಾನ ಸೆಟ್ ಮಾಡಿ. ನೀವು ಯಾವ ಡಿಗ್ರಿಯ ಮೇಲೆ ತಾಪಮಾನ ಸೆಟ್ ಮಾಡುತ್ತೀರೊ, ಅದಕ್ಕೆ ತಕ್ಕಂತೆಯೇ ವಿದ್ಯುತ್ ಬಿಲ್ ಬರುತ್ತದೆ. ಹೀಗಾಗಿ ಅದನ್ನು ಮೀಡಿಯಂಗೆ ಸೆಟ್ ಮಾಡಿ.
• ರೂಮ್ ತಂಪಾಗಿದೆ ಎನಿಸಿದಾಗ ಎಸಿ ಆಫ್ ಮಾಡಿಬಿಡಿ.
• ಏಸಿಯ ಫಿಲ್ಟರ್ ಕೊಳಕಾಗಿದ್ದಲ್ಲಿ ಅದು ರೂಮ್‌ನ್ನು ತಂಪುಗೊಳಿಸಲು ಹೆಚ್ಚು ವಿದ್ಯುತ್ ನ್ನು ಖರ್ಚು ಮಾಡುತ್ತದೆ. ಹಾಗಾಗಿ ಫಿಲ್ಟರ್‌ನ್ನು ಆಗಾಗ ಸ್ವಚ್ಛಗೊಳಿಸುತ್ತಾ ಇರಿ.
ಎಲೆಕ್ನಿಕ್ ಸ್ಟವ್
• ಚಪ್ಪಟೆ ತಳದ ಪಾತ್ರೆಗಳು ಅಂದರೆ ಸ್ಟವ್ ಮೇಲೆ ಸರಿಯಾಗಿ ಫಿಟ್ ಆಗುತ್ತಿದ್ದರೆ ಅದರಲ್ಲಿ ಅಡುಗೆ ಕಡಿಮೆ ತಾಪಮಾನದಲ್ಲೂ ಬಹುಬೇಗ ತಯಾರಾಗುತ್ತದೆ.
• ಒಂದು ವೇಳೆ ಹೀಟಿಂಗ್ ಸ್ಟವ್ ಹೀಟಿಂಗ್ ಕಾಯಿಲ್‌ಗೆಹೋಲಿಸಿದಲ್ಲಿ ಪಾತ್ರೆ ಚಿಕ್ಕದು ಅಥವಾ ದೊಡ್ಡದಾಗಿದ್ದಲ್ಲಿ ವಿದ್ಯುತ್ ಸಾಕಷ್ಟು ವ್ಯರ್ಥವಾಗುತ್ತದೆ.
ಎಲೆಕ್ಟ್ರಾನಿಕ್ ಉಪಕರಣಗಳು
• ಒಂದು ವೇಳೆ ಟಿವಿ ಐದು ಗಂಟೆಗಿಂತಲೂ ಹೆಚ್ಚು ಹೊತ್ತು ನಡೆಯುತ್ತಿದ್ದಲ್ಲಿ ಅದು ಹೆಚ್ಚು ವಿದ್ಯುತ್ ಖರ್ಚು ಮಾಡುತ್ತದೆ. ಅದರ ಜತೆಗೆ ಡಿವಿಡಿ ಪ್ಲೇಯರ್, ಹೋಂ ಥಿಯೇಟರ್ ಅಳವಡಿಸಲ್ಪಟ್ಟಿದ್ದರೆ ವಿದ್ಯುತ್ ಬಿಲ್ ಮತ್ತಷ್ಟು ಹೆಚ್ಚು ಬರುತ್ತದೆ. ನಿಮಗೆ ಟಿವಿ ನೋಡಬೇಕಾದ ಸಂದರ್ಭದಲ್ಲೇ ಆನ್ ಮಾಡಿ. ಇಲ್ಲದಿದ್ದರೆ ಅದು ಆಫ್ ಸ್ಥಿತಿಯಲ್ಲೇ
• ಟಿವಿ ಹಾಗೂ ಕಂಪ್ಯೂಟರ್ ಆಫ್ ಆಗಿದ್ದು, ಅದಕ್ಕೆ ಸಂಬಂಧಪಟ್ಟ ಉಪಕರಣಗಳು ಸ್ಟ್ಯಾಂಡ್ ಬೈ ಮೇಡ್‌ನಲ್ಲಿದ್ದರೂ ಕೂಡ ವಿದ್ಯುತ್ ಬಳಕೆ ಆಗುತ್ತಿರುತ್ತದೆ. ಕಂಪ್ಯೂಟರ್ ಹಾಗೂ ಟಿವಿಯಂತಹ ಉಪಕರಣಗಳನ್ನು ಬಳಸದೇ ಇದ್ದಾಗ, ಅವುಗಳ ಪ್ಲಗ್ ತೆಗೆದಿಡಿ.
No comments:
Post a Comment